"ಅರಣ್ಯ ಇಲಾಖೆ ವಸತಿ ಗೃಹ ಅನಾಥ " ; ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ ನಿರ್ಮಾಣ

 ಅರಕಲಗೂಡು ಪಟ್ಟಣ ಸಮೀಪದ ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ 1.16ಕೋಟಿರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅರಣ್ಯ ಇಲಾಖೆ ನೂತನ ಕಚೇರಿ,ವಸತಿ ಗೃಹಗಳ ಬಳಿ ಅನೈತಿಕ ಚಟುವಟಿಕೆ ನಡೆಯುವ ತಾಣವಾಗಿ ಮಾರ್ಪಟ್ಟಿದೆ.

ಕಳೆದ 2019ರ ಜನವರಿ 24ರಂದು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅರಣ್ಯ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು.ಒಂದು ವರ್ಷಗಳ ಅವಧಿಯಲ್ಲಿ ಕೆಲಸ ಮುಗಿಸಿ ತಾಲೂಕು ಮಟ್ಟದ ಅರಣ್ಯ ಇಲಾಖೆ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕು ಎಂದು ತಿಳುವಳಿಕೆ ನೀಡಿದ್ದರು.ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಒಂದೂವರೆ ವರ್ಷ ಕಳೆದಿದ್ದು ಉದ್ಘಾಟನೆಗೊಂಡಿಲ್ಲ.

ಸಾಲುಮರದ ತಿಮ್ಮಕ್ಕ ಪಾರ್ಕ್ ಎದುರು ರಾಷ್ಟ್ರೀಯ ಹೆದ್ದಾರಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳ್ಳಲಿದ್ದು, ಮತ್ತೊಷ್ಟು ಅಭಿವೃದ್ಧಿ ಕೆಲಸಗಳನ್ನು ಪಾರ್ಕ್‍ನಲ್ಲಿ ಅಳವಡಿಸಿ ಹೆಚ್ಚುಮಂದಿ ಸಾರ್ವಜನಿಕರು ವೀಕ್ಷಣೆಗೆ ಬರುವಂತೆ ನೋಡಿಕೊಳ್ಳುವ ದೃಷ್ಠಿಯಿಂದ ಅರಣ್ಯ ಇಲಾಖೆ ಕಚೇರಿ,ವಸತಿ ಗೃಹಗಳನ್ನು ಕಟ್ಟಲಾಗಿದೆ.

ಕಟ್ಟಡಗಳ ಶಿಥಿಲಾವಸ್ಥೆ : ಲಕ್ಷಾಂತರರೂ ವೆಚ್ಚದಲ್ಲಿ ಒಂದು ಕಚೇರಿ ಕಟ್ಟಡ ಸೇರಿದಂತ್ತೆ ಒಟ್ಟು 7 ವಸತಿ ಗೃಹಗಳನ್ನು ಕಟ್ಟಲಾಗಿದೆ.ವಿದ್ಯುತ್ ಸಂಪರ್ಕ ಹೊರತುಪಡಿಸಿದರೇ ಉಳಿದಂತ್ತೆ ಇತರೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ.ಆದರೆ ನೂತನ ಕಟ್ಟಡಗಳ ಕಾಮಗಾರಿ ಕಳಪೆಯಿಂದ ಕೂಡಿರುವ ಪರಿಣಾಮ ಉದ್ಘಾಟನೆಗೊಳ್ಳುವ ಮುನ್ನವೆ ಕೆಲ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. 

ಸಿಂಟೆಕ್ಸ್ಗಳು ಕಳವು : ಕಟ್ಟಡಗಳ ಕಾಮಗಾರಿ ಗುತ್ತಿಗೆ ಪಡೆದಿರುವವರು ಕಳಪೆ ಸಾಮಾಗ್ರಿಗಳನ್ನು ಅಳವಡಿಸಿದ್ದಾರೆ.ಈ ಪೈಕಿ 7ಕಟ್ಟಡಗಳಲ್ಲಿ ಅಳವಡಿಸಲಾಗಿದ್ದ ನೀರು ಸಂಗ್ರಹದ ಒಟ್ಟು 7ಸಿಂಟೆಕ್ಸ್‍ಗಳನ್ನು ಪೈಪ್ ಸಮೇತವಾಗಿ ಕಳ್ಳರು ಕದ್ದೋಯ್ದಿದ್ದಾರೆ.ಅರಣ್ಯ ಇಲಾಖೆಯ ಇದೇ ದೋರಣೆ ಮುಂದುವರಿದರೇ ಕಟ್ಟಡಗಳಿಗೆ ಅಳವಡಿಸಿರುವ ಬಾಗಿಲು,ಕಿಟಕಿ ಇತರೆ ಪರಿಕರಗಳನ್ನು ಕಳವು ಮಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ನೀರು ಸರಬರಾಜು ಮಾಡುವ ಮೋಟಾರ್‍ ಸ್ಟಾಟರ್ಸ್ ಮತ್ತು ಕೇಬಲ್‍ಗಳನ್ನು ಸಹ ಕಳ್ಳತನಮಾಡಲಾಗಿದೆ.

ನೂತನ ಕಟ್ಟಡಗಳಿಗೆ ಹಿಂದೆ ಸಿಂಟೆಕ್ಸ್ ಅಳವಡಿಸಿರುವುದು 

ಅನೈತಿಕ ಚಟುವಟಿಕೆ ತಾಣ : ಹೊನ್ನವಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಪಾರ್ಕ್,ಅಲ್ಪಸಂಖ್ಯಾತ ಮೊರಾರ್ಜಿ ಶಾಲೆ ಕಟ್ಟಡ ಹಾಗೂ ನೂತನ ಅರಣ್ಯ ಇಲಾಖೆ ಕಚೇರಿ,ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.ಪಟ್ಟಣದ ಹೊರವಲಯದಲ್ಲಿರುವ ಈ ತಾಣಗಳಲ್ಲಿ ಅನೈತಿಕ ಚಟುವಟಿಕೆ ನಡೆಯಲು ಸಹಕಾರಿಯಾಗಿದೆ.ಈ ಕೃತ್ಯ ನಡೆಸಲು ರಾತ್ರಿ ಎನ್ನಬೇಕಿಲ್ಲ.ಬೆಳಗ್ಗೆ,ಮಧ್ಯಾಹ್ನ ಹಾಗೂ ಸಂಜೆ ವೇಳೆ ಯಾವುದೇ ಭಯವಿಲ್ಲದೆ ಸಮಾಜಘಾತಕ ಚಟುವಟಿಕಗಳು ನಡೆಯುತ್ತಿವೆ.

ಕಟ್ಟಡಗಳಿಗೆ ಅಳವಡಿಸಿದ್ದ ಸಿಂಟೆಕ್ಸ್  ಕಳವು ಮಾಡಿರುವುದು 
ಕಾವಲುಗಾರ ಇಲ್ಲ : ಅರಣ್ಯ ಇಲಾಖೆ ಅರಣ್ಯ ರಕ್ಷಕರನ್ನು ನೇಮಕಮಾಡಿಕೊಂಡಿದೆ.ನೂತನ ಕಟ್ಟಡಗಳಿಗೆ ಹೊಂದಿಕೊಂಡಂತ್ತೆ ಅರಣ್ಯ ಕೂಡ ಇದೆ.ಇದು ಮೀಸಲು ಅರಣ್ಯ ಪ್ರದೇಶವಾಗಿದೆ.ಇಲ್ಲಿ ವಾಹನಗಳ ಸಂಚಾರಕ್ಕೆ ರಸ್ತೆ ಮಾಡಿಕೊಟ್ಟಿರುವ ಹಿನ್ನೆಲೆ ಮರಗಳ ಕಟಾವು ಕೂಡ ನಡೆಯುತ್ತಿದೆ.ಸಮೀಪದಲ್ಲಿ ಪಾರ್ಕ್ ಇದ್ದು,ಇಲ್ಲಿ ಕಾವಲು ಗಾರರು ಇದ್ದಾರೆ.ಕೇವಲ 500ಮೀ ದೂರದಲ್ಲಿ ನೂತನ ಕಟ್ಟಡಗಳ ಸಮುಚ್ಚಯವಿದೆ.ಹೀಗಿದ್ದರೂ ಕೂಡ ಕಳವು ಪ್ರಕರಣಗಳು,ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಅರಣ್ಯ ಇಲಾಖೆಯೂ ಸಾರ್ವಜನಿಕವಾಗಿ ಇದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ ಎನ್ನಬಹುದು.


ಸಂಪಾದಕ -ಅಭಿ.ಎಸ್.ವಿಜಯ್ ಕುಮಾರ್ 


//disable Text Selection and Copying

ಕಾಮೆಂಟ್‌ಗಳು