ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ : ಮಾಜಿ ಸಚಿವ ಮಂಜು ಸ್ಪಷ್ಟಣೆ

 

ಅರಕಲಗೂಡು : ರಾಜ್ಯದಲ್ಲಿ ನಮ್ಮದೆ ಬಿಜೆಪಿ ಸರಕಾರ ಇದೆ.ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತುನೀಡಲಾಗಿದೆ.ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎ.ಮಂಜು ಸ್ಪಷ್ಟಣೆ ನೀಡಿದರು.

 ಅರಕಲಗೂಡು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾದ್ಯಮದಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದದು.1999ರಲ್ಲಿ ಬಿಜೆಪಿಯಿಂದ ನಾನು ಶಾಸಕನಾಗಿ ಗೆದ್ದಿದ್ದೇನೆ.ಜಿಲ್ಲೆಯಲ್ಲಿ ಅಂದು ನಾಲ್ಕುಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು.ಆ ಸಂದರ್ಭದಲ್ಲಿ ಮೋದಿ,ಅಮಿತ್ ಶಾ ಇರಲಿಲ್ಲ.ಇಂದು ಅವರೆಲ್ಲರೂ ಇದ್ದಾರೆ.ಇಂತವರ ಸಹಕಾರ ಹಾಗೂ ಕ್ಷೇತ್ರದ ಎಲ್ಲರ ನೆರವಿನೊಂದಿಗೆ ಮುಂದೆ ಬರುವ ಜಿಪಂ ತಾಪಂ ಚುನಾವಣೆ ವೇಳೆ ಕ್ಷೇತ್ರದಲ್ಲಿ ಇದ್ದು ಹೆಚ್ಚು ಮಂದಿ ಗೆಲ್ಲುಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಭರವಸೆಯನ್ನು ಹೊಂದಿದ್ದೇನೆ ಎಂದರು.

ನನ್ನ ವಿರೋಧಿಗಳು ನಾನು ಕಾಂಗ್ರೆಸ್ ಪಕ್ಷ ಸೇರುವ ವದಂತ್ತಿಯನ್ನು ಮಾದ್ಯಮಗಳಿಗೆ ಹರಿಬಿಡುತಿದ್ದಾರೆ.ನಾನು ಹೆಚ್ಚು ಕ್ಷೇತ್ರದ ಜನರ ವಿಶ್ವಾಸ ಪಡೆದು ಹಂತ ಹಂತವಾಗಿ ರಾಜಕೀಯವಾಗಿ  ಮೇಲೆ ಬಂದಿದ್ದೇನೆ.ಜಿಲ್ಲೆಯ ರಾಜಕಾರಣದಲ್ಲಿ ಅರಕಲಗೂಡು ಕ್ಷೇತ್ರ ತುಂಬಾ ವಿಭಿನ್ನವಾಗಿದೆ.ಇಲ್ಲಿನ ಮತದಾರರ ನಿರ್ಧಾರವನ್ನು ಯಾರೂ ಕೂಡ ಅರಿಯಲು ಸಾಧ್ಯವಿಲ್ಲ.ಇದನ್ನು ಬಲವಾಗಿ ನಂಬಿರುವ ನನಗೆ ಕ್ಷೇತ್ರದ ಎಲ್ಲಾ ಮತದಾರರು ಮುಂದಿನ ಚುನಾವಣೆಯಲ್ಲಿ ಸಹಕಾರ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ.ತಾಪಂ ಕ್ಷೇತ್ರ ಮೀಸಲಾತಿ ನ್ಯೂನ್ಯತೆಯಿಂದ ಕೂಡಿದೆ : ಜಿಲ್ಲೆಯಲ್ಲಿ ಒಟ್ಟು 44 ಜಿಪಂ ಕ್ಷೇತ್ರಗಳಿದ್ದು,ಕ್ಷೇತ್ರದಲ್ಲಿನ ಮೀಸಲಾತಿ ಸಮದಾನಕರವಾಗಿಲ್ಲ.ಹೊಳೆನರಸೀಪುರ ತಾಲೂಕಿನಲ್ಲಿ ಸಾಮಾನ್ಯವರ್ಗ ಪುನಾರ್ವತನೆಯಾಗಿದೆ.ಅಲ್ಲಿನ ರಾಜಕೀಯ ಶಕ್ತಿಯಿಂದ ಮೀಸಲಾತಿ ಅವರಿಗೆ ಅನುಕೂಲಕರವಾಗಿ ನಿಗದಿಯಾಗಿದೆ.ನಮ್ಮ ಕ್ಷೇತ್ರದಲ್ಲಿಯೂ ಕೂಡ ಮೀಸಲಾತಿ ನಿಗದಿ ತೃಪ್ತಿದಾಯಕವಾಗಿಲ್ಲ.ತಾಲೂಕಿನ ರಾಮನಾಥಪುರ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಹಿಂದೆ ಇತ್ತು.ಅದು ಈ ಬಾರಿಯೂ ಕೂಡ ಸಾಮಾನ್ಯ ಮಹಿಳೆಗೆ ಮೀಸಲಾಗಿ ಮುಂದುವರಿದಿದೆ.ಲೋಪವಾಗಿರುವ ಕುರಿತು ಕ್ಷೇತ್ರದ ಶಾಸಕರು ಗಮನಹರಿಸಿ ಕೇಳಬೇಕಿದೆ.ನಾನು ಕ್ಷೇತ್ರದಲ್ಲಿ ಸೋತಿದ್ದೇನೆ,ಕಾನೂನುಪರ ಪ್ರಶ್ನಿಸುತ್ತೇನೆ.ಒಂದುವಾರ ಕಾಲ ಮೀಸಲಾಯಿತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದರು.

ಸಂಪಾದಕ : ಅಭಿ.ಎಸ್.ವಿಜಯ್ ಕುಮಾರ್  


//disable Text Selection and Copying

ಕಾಮೆಂಟ್‌ಗಳು