ಹೆಬ್ಬಾಲೆ ಗ್ರಾಪಂನಿಂದ ಮನೆ ಮನೆಗೆ ಗ್ರಾಮಪಂಚಾಯಿತಿ ಕಾರ್ಯಕ್ರಮಕ್ಕೆ ಚಾಲನೆ

 

ಅರಕಲಗೂಡು ತಾಲೂಕು ಅತ್ನಿಉಪ್ಪಾರಕೊಪ್ಪಲು ಗ್ರಾಮದಲ್ಲಿ ಸೋಮವಾರ ನಡೆದ ಮನೆಮನೆಗೆ ಗ್ರಾಮ ಪಂಚಾಯಿತಿ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಅನುಮೋದನೆ ಪತ್ರವನ್ನು ವಿತರಿಸಲಾಯಿತು.



ಅರಕಲಗೂಡು : ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಗ್ರಾಮೀಣ ಜನರಿಗೆ ಹಲವು ಯೋಜನೆಗಳ ಮೂಲಕ ಸಮುದಾಯ ಅಭಿವೃದ್ಧಿಯನ್ನು ಮಾಡಲು ಅವಕಾಶವಿದೆ.ಈ ನಿಟ್ಟಿನಲ್ಲಿ ಮನೆ ಮನೆಗೆ ಗ್ರಾಮ ಪಂಚಾಯಿತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಹರೀಶ್ ತಿಳಿಸಿದರು.

ತಾಲೂಕಿನ ಅತ್ನಿಉಪ್ಪಾರಕೊಪ್ಪಲು ಗ್ರಾಮದಲ್ಲಿ ಮನೆ ಮನೆಗೆ ಗ್ರಾಮ ಪಂಚಾಯಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಸಾಲಿನಲ್ಲಿ ಮಂಜೂರಾಗಿರುವ ಸಮುದಾಯ ಕಾರ್ಯಕ್ರಮಗಳ ಪ್ರಯೋಜನಗಳನ್ನು ಅರ್ಹ ಫಲಾನುಭವಿ ಮನೆ ಬಾಗಿಲಿಗೆ ಪಂಚಾಯಿತಿ ಆಡಳಿತ ಬಂದು ತಲುಪಿಸುವ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.ಇದಕ್ಕೆ ಎಲ್ಲಾ ಸದಸ್ಯರುಗಳ ಪೂರ್ವಾನುಮೋದನೆ ದೊರೆತಿದೆ ಎಂದು ಹೇಳಿದರು.

ಅಭಿವೃದ್ದಿ ಅಧಿಕಾರಿ ನಾಗರಾಜು ಮಾತನಾಡಿ,ಜಿಲ್ಲೆಯಲ್ಲಿಯೇ ವಿಶೇಷವಾಗಿ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ 15ಹಳ್ಳಿಗಳಲ್ಲಿಯೂ ಸಮುದಾಯ ಕಾರ್ಯಕ್ರಮಗಳನ್ನು ಜನರು ವಾಸಿಸುವ ಮನೆ ಬಳಿ ತೆರಳಿ ಕಲ್ಪಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.ಇದಕ್ಕೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳ ಸಹಕಾರ ಸಹಕಾರ ದೊರೆಯುತ್ತಿದೆ.ಸಕಾಲದಲ್ಲಿ ಸಾರ್ವಜನಿಕರ ಸಹಕಾರ ದೊರೆತರೇ ನಿಗದಿತ ಅವಧಿಯಲ್ಲಿ ಗುರಿಹೊಂದಲಾಗುವುದು ಎಂದು ತಿಳಿಸಿದರು.ಉದ್ಯೋಗಖಾತ್ರಿ ಯೋಜನೆಯಡಿ ಅನಿಯಮಿತವಾಗಿ ಸಮುದಾಯ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿದೆ.ಈ ಸಲುವಾಗಿ ಜಾಬ್ ಕಾರ್ಡ್‍ಗಳನ್ನು ಅಧಿಕಗೊಳಿಸಿ,ಆಯಾ ಗ್ರಾಮಗಳಲ್ಲಿ ಕೈಗೊಳ್ಳುವ ಕೆಲಸವನ್ನು ಜನರಿಗೆ ನೇರವಾಗಿ ಕಲ್ಪಿಸುವ ಉದ್ದೇಶವನ್ನು ಸಹ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಚಂದ್ರಣ್ಣ,ಸದಸ್ಯರಾದ ಶಿವರಾಜ್,ಮಾಸ್ತಿಗೌಡ,ಮಾಜಿ ಅಧ್ಯಕ್ಷಕೃಷ್ಣೇಗೌಡ,ಜಿಲ್ಲಾ ಬಿಎಸ್ಪಿ ಅಧ್ಯಕ್ಷ ಅತ್ನಿಹರೀಶ್,ಮುಖಂಡರಾದ ರವಿ,ಪೂಜಾರಿಶಿವರಾಜ್,ಸ್ವಾಮೀಗೌಡ,ಫಲಾನುಭವಿ ಈರಾಜಮ್ಮ ಇತರರು ಹಾಜರಿದ್ದರು.

ಸಂಪಾದಕ : ಅಭಿ.ಎಸ್.ವಿಜಯ್ ಕುಮಾರ್ 


//disable Text Selection and Copying //========================================================== //disable right click menu //============================================================== // disable viewing page source

ಕಾಮೆಂಟ್‌ಗಳು