ಅರಕಲಗೂಡು ಕ್ರೀಡಾಂಗಣ ಪಕ್ಕದ ಚರಂಡಿ ಕಾಮಗಾರಿ ಕಳಪೆ : ಸಾರ್ವಜನಿಕರ ಆರೋಪ

ಅರಕಲಗೂಡಿನ ಕ್ರೀಡಾಂಗಣ ಬಳಿ ಪಪಂ ಅನುದಾನದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಚರಂಡಿಯಲ್ಲಿ ನೀರು ನಿಂತ್ತಿರುವುದು.

ಅರಕಲಗೂಡು : ಪಟ್ಟಣ ಪಂಚಾಯಿತಿ 15ನೇ ಹಣಕಾಸು ಯೊಜನೆಯಡಿ ಪಟ್ಟಣದ ಕ್ರೀಡಾಂಗಣ ಬಳಿ ಮಳೆನೀರು ಹೋಗುವ ಸಲುವಾಗಿ 10ಲಕ್ಷರು ವೆಚ್ಚದಲ್ಲಿ ನಿರ್ಮಿಸಿರುವ ಚರಂಡಿ,ಡೆಕ್‍ಸ್ಲ್ಯಾಬ್ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ವವಹಿಸಿರುವ ಕಾರಣ ಮಳೆಗಾಲದಲ್ಲಿ ನೀರು ಹೊರಹೋಗಲು ಸಾಧ್ಯವಾಗದೆ ನಿಂತ್ತಲ್ಲಿಯೆ ನಿಂತ್ತು ಮಲೀನತೆ ಉಂಟುಮಾಡುತಿತ್ತು.ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಪಪಂ ಅನುಧಾನದಲ್ಲಿ 200ಮೀ ಅಂತರದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.ಈ ಕೆಲಸ ಪೂರ್ಣಗೊಂಡು ಕೇವಲ ಎರಡು ತಿಂಗಳು ಮುಗಿದಿದ್ದು,ಕಳಪೆಯಿಂದ ಕೂಡಿರುವ ಹಿನ್ನೆಲೆ ನೂತನ ಡೆಕ್‍ಸ್ಲ್ಯಾಬ್ ಕುಸಿಯುತ್ತಿದೆ ಎಂದು ಕುಮಾರಸ್ವಾಮಿ,ಚಂದ್ರೇಗೌಡ ಆರೋಪಿಸಿದ್ದಾರೆ.

ಚರಂಡಿ ಕಾಮಗಾರಿಯನ್ನು ನಿಯಮಾನುಸಾರ ಕೈಗೊಂಡಿದ್ದರೇ ಮಳೆಯ ನೀರು ಸರಾಗವಾಗಿ ಹರಿಯುತಿತ್ತು.ಅವೈಜ್ಞಾನಿಕ,ಕಳಪೆ ಹಾಗೂ ನ್ಯೂನ್ಯತೆಯಿಂದ ಕೂಡಿರುವುದರಿಂದ ನೂತನ ಚರಂಡಿಯಲ್ಲಿಯೆ ನೀರು ನಿಂತ್ತು ಮಲೀನತೆ ಹರಡುತ್ತಿದೆ.ಅಲ್ಲದೆ ಕಾಂಕ್ರಿಟ್ ಚರಂಡಿ ತಡೆಗೋಡೆಯನ್ನು ಕೈಯಿಂದ ಕೆರೆದರೆ ಮಣ್ಣು ರೀತಿ ಉದುರುತ್ತಿದೆ.ಇದರಿಂದ ಲಕ್ಷಾಂತರರೂ ತೆರಿಗೆ ಹಣ ಪೋಲಾಗಿದೆ.ಕಾಮಗಾರಿಯನ್ನು ಹೊಸದಾಗಿ ಗುಣಮಟ್ಟದಿಂದ ಮಾಡಿಸಬೇಕು.ಇಲ್ಲವಾದರೇ ಪಪಂ ಎದುರು ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾರ್ಕ್‍ಪಕ್ಕದ ಕಾಂಪೌಂಡ್‍ಗೆ ಹೊಂದಿಕೊಂಡಂತ್ತೆ ಚರಂಡಿ ಕೆಲಸವನ್ನು ನಿರ್ವಹಿಸಲಾಗಿದೆ.ಕಾಂಪೌಂಡ್‍ನಿಂದ ನಾಲ್ಕು ಅಡಿ ಅಂತರವನ್ನು ಬಿಟ್ಟು ಚರಂಡಿಯನ್ನು ಮಾಡಿದ್ದರೇ ಕಾಂಪೌಂಡ್ ಸುರಕ್ಷಿತವಾಗಿರುತಿತ್ತು.ಆದರೇ ಇದಕ್ಕೆ ಹೊಂದಿಕಂಡಂತ್ತೆ ಅವೈಜ್ಞಾನಿವಾಗಿ ಚರಂಡಿ ಕೆಲಸ ಮಾಡಿರುವುದರಿಂದ ಕಾಂಪೌಂಡ್ ಕೆಲವೇ ದಿನಗಳಲ್ಲಿ ಕುಸಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.ಕೆಲಸ ನಡೆಯುವ ವೇಳೆ ಪಪಂ ಅಧಿಕಾರಿಗಳು,ಎಂಜಿನಿಯರ್ ಭೇಟಿನೀಡಿ ಪರಿಶೀಲನೆ ಮಾಡಿದ್ದರೇ ಗುಣಮಟ್ಟದ ಕೆಲಸವನ್ನು ಕೈಗೊಳ್ಳಬಹುದಾಗಿತ್ತು.ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಆಪಾದಿಸಿದ್ದಾರೆ.

ಸ್ಥಳಕ್ಕೆ ಮುಖ್ಯಾಧಿಕಾರಿ ಭೇಟಿ : ಕ್ರೀಡಾಂಗಣದ  ಬಳಿ ನಿರ್ಮಾಣಗೊಂಡಿರುವ ಚರಂಡಿ ಕಾಮಗಾರಿಯನ್ನು ಪಪಂ ಮುಖ್ಯಾಧಿಕಾರಿ ಶಿವಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಕಾಮಗಾರಿ ಕಳಪೆ,ಅವೈಜ್ಞಾನಿಕ ಹಾಗೂ ನ್ಯೂನ್ಯತೆಯಿಂದ ಕೂಡಿರುವುದನ್ನು ಖಾತ್ರಿಪಡಿಸಿಕೊಂಡರು.

ಅರಕಲಗೂಡು ಪಪಂ ಮುಖ್ಯಾಧಿಕಾರಿ ಶಿವಕುಮಾರ್ ಚರಂಡಿ ಕಾಮಗಾರಿಯನ್ನು ವೀಕ್ಷಣೆ ಮಾಡುತ್ತಿರುವುದು.
 

ಗುತ್ತಿಗೆದಾರನಿಗೆ ನೋಟಿಸ್ : 15ನೇ ಹಣಕಾಸು ಯೋಜನೆಯಡಿ 10ಲಕ್ಷರು ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಕ್ರೀಡಾಂಗಣದ ಬಳಿ ಚರಂಡಿ ಕಾಮಗಾರಿ ನ್ಯೂನ್ಯತೆಯಿಂದ ಕೂಡಿದೆ.ಈಗಾಗಲೆ ಹಣ ಕೂಡ ಸಂದಾಯವಾಗಿದೆ.ಎರಡು ವರ್ಷಗಳ ಅವಧಿ ನಿರ್ವಹಣೆ ಇರುವ ಕಾರಣ ಸ್ವಂತ ಹಣದಿಂದ ನ್ಯೂನ್ಯತೆಯನ್ನು ಸರಿಪಡಿಸಬೇಕು.ಇಲ್ಲವಾದರೇ ಕೆಡಬ್ಲ್ಯೂ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕಳಪೆ ಚರಂಡಿ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರಗೆ ನೋಟಿಸ್ ಜಾರಿಮಾಡಿರುವುದು.


ಸಂಪಾದಕ : ಅಭಿ.ಎಸ್.ವಿಜಯ್ ಕುಮಾರ್ 




//disable Text Selection and Copying //========================================================== //disable right click menu //============================================================== // disable viewing page source

ಕಾಮೆಂಟ್‌ಗಳು