ಪೋಸ್ಟ್‌ಗಳು

ಅರಕಲಗೂಡಿನಲ್ಲಿ ಅನಂಗನವಾಡಿ ಕಾರ್ಯಕರ್ತೆರಿಂದ ಪ್ರತಿಭಟನೆ

ಇಮೇಜ್
 ಅರಕಲಗೂಡು :ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಪ್ರತಿಭಟನೆ ನೆಡೆಯಿತು. ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರಿ ನೌಕರರೆಂದು ಪರಿಗಣಿಸಿ, ಸಮಾನ ವೇತನ ನೀಡಬೇಕು. ಅಲ್ಲದೆ ಮಾಸಿಕ ವೇತನವನ್ನು 20ಸಾವಿರ ರೂ ನೀಡಬೇಕು. ಇತರೆ ಬೇಡಿಕೆಗಳ ಮನವಿ ಪತ್ರವನ್ನು ಸಿಡಿಪಿಒ ಹರಿಪ್ರಸಾದ್ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಅರುಣಾ. ಯಶೋದ ಇತರರು ಭಾಗವಹಿಸಿದ್ದರು.

ಅರಕಲಗೂಡು ಕ್ರೀಡಾಂಗಣ ಪಕ್ಕದ ಚರಂಡಿ ಕಾಮಗಾರಿ ಕಳಪೆ : ಸಾರ್ವಜನಿಕರ ಆರೋಪ

ಇಮೇಜ್
ಅರಕಲಗೂಡಿನ ಕ್ರೀಡಾಂಗಣ ಬಳಿ ಪಪಂ ಅನುದಾನದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಚರಂಡಿಯಲ್ಲಿ ನೀರು ನಿಂತ್ತಿರುವುದು. ಅರಕಲಗೂಡು : ಪಟ್ಟಣ ಪಂಚಾಯಿತಿ 15ನೇ ಹಣಕಾಸು ಯೊಜನೆಯಡಿ ಪಟ್ಟಣದ ಕ್ರೀಡಾಂಗಣ ಬಳಿ ಮಳೆನೀರು ಹೋಗುವ ಸಲುವಾಗಿ 10ಲಕ್ಷರು ವೆಚ್ಚದಲ್ಲಿ ನಿರ್ಮಿಸಿರುವ ಚರಂಡಿ,ಡೆಕ್‍ಸ್ಲ್ಯಾಬ್ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ವವಹಿಸಿರುವ ಕಾರಣ ಮಳೆಗಾಲದಲ್ಲಿ ನೀರು ಹೊರಹೋಗಲು ಸಾಧ್ಯವಾಗದೆ ನಿಂತ್ತಲ್ಲಿಯೆ ನಿಂತ್ತು ಮಲೀನತೆ ಉಂಟುಮಾಡುತಿತ್ತು.ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಪಪಂ ಅನುಧಾನದಲ್ಲಿ 200ಮೀ ಅಂತರದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.ಈ ಕೆಲಸ ಪೂರ್ಣಗೊಂಡು ಕೇವಲ ಎರಡು ತಿಂಗಳು ಮುಗಿದಿದ್ದು,ಕಳಪೆಯಿಂದ ಕೂಡಿರುವ ಹಿನ್ನೆಲೆ ನೂತನ ಡೆಕ್‍ಸ್ಲ್ಯಾಬ್ ಕುಸಿಯುತ್ತಿದೆ ಎಂದು ಕುಮಾರಸ್ವಾಮಿ,ಚಂದ್ರೇಗೌಡ ಆರೋಪಿಸಿದ್ದಾರೆ. ಚರಂಡಿ ಕಾಮಗಾರಿಯನ್ನು ನಿಯಮಾನುಸಾರ ಕೈಗೊಂಡಿದ್ದರೇ ಮಳೆಯ ನೀರು ಸರಾಗವಾಗಿ ಹರಿಯುತಿತ್ತು.ಅವೈಜ್ಞಾನಿಕ,ಕಳಪೆ ಹಾಗೂ ನ್ಯೂನ್ಯತೆಯಿಂದ ಕೂಡಿರುವುದರಿಂದ ನೂತನ ಚರಂಡಿಯಲ್ಲಿಯೆ ನೀರು ನಿಂತ್ತು ಮಲೀನತೆ ಹರಡುತ್ತಿದೆ.ಅಲ್ಲದೆ ಕಾಂಕ್ರಿಟ್ ಚರಂಡಿ ತಡೆಗೋಡೆಯನ್ನು ಕೈಯಿಂದ ಕೆರೆದರೆ ಮಣ್ಣು ರೀತಿ ಉದುರುತ್ತಿದೆ.ಇದರಿಂದ ಲಕ್ಷಾಂತರರೂ ತೆರಿಗೆ ಹಣ ಪೋಲಾಗಿದೆ.ಕಾಮಗಾರಿಯನ್ನು ಹೊಸದಾಗಿ ಗುಣಮಟ್ಟದಿಂದ ಮಾಡಿಸಬೇಕು.ಇಲ್ಲವಾದರ

ಹೆಬ್ಬಾಲೆ ಗ್ರಾಪಂನಿಂದ ಮನೆ ಮನೆಗೆ ಗ್ರಾಮಪಂಚಾಯಿತಿ ಕಾರ್ಯಕ್ರಮಕ್ಕೆ ಚಾಲನೆ

ಇಮೇಜ್
  ಅರಕಲಗೂಡು ತಾಲೂಕು ಅತ್ನಿಉಪ್ಪಾರಕೊಪ್ಪಲು ಗ್ರಾಮದಲ್ಲಿ ಸೋಮವಾರ ನಡೆದ ಮನೆಮನೆಗೆ ಗ್ರಾಮ ಪಂಚಾಯಿತಿ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಅನುಮೋದನೆ ಪತ್ರವನ್ನು ವಿತರಿಸಲಾಯಿತು. ಅರಕಲಗೂಡು : ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಗ್ರಾಮೀಣ ಜನರಿಗೆ ಹಲವು ಯೋಜನೆಗಳ ಮೂಲಕ ಸಮುದಾಯ ಅಭಿವೃದ್ಧಿಯನ್ನು ಮಾಡಲು ಅವಕಾಶವಿದೆ.ಈ ನಿಟ್ಟಿನಲ್ಲಿ ಮನೆ ಮನೆಗೆ ಗ್ರಾಮ ಪಂಚಾಯಿತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಹರೀಶ್ ತಿಳಿಸಿದರು. ತಾಲೂಕಿನ ಅತ್ನಿಉಪ್ಪಾರಕೊಪ್ಪಲು ಗ್ರಾಮದಲ್ಲಿ ಮನೆ ಮನೆಗೆ ಗ್ರಾಮ ಪಂಚಾಯಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಸಾಲಿನಲ್ಲಿ ಮಂಜೂರಾಗಿರುವ ಸಮುದಾಯ ಕಾರ್ಯಕ್ರಮಗಳ ಪ್ರಯೋಜನಗಳನ್ನು ಅರ್ಹ ಫಲಾನುಭವಿ ಮನೆ ಬಾಗಿಲಿಗೆ ಪಂಚಾಯಿತಿ ಆಡಳಿತ ಬಂದು ತಲುಪಿಸುವ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.ಇದಕ್ಕೆ ಎಲ್ಲಾ ಸದಸ್ಯರುಗಳ ಪೂರ್ವಾನುಮೋದನೆ ದೊರೆತಿದೆ ಎಂದು ಹೇಳಿದರು. ಅಭಿವೃದ್ದಿ ಅಧಿಕಾರಿ ನಾಗರಾಜು ಮಾತನಾಡಿ,ಜಿಲ್ಲೆಯಲ್ಲಿಯೇ ವಿಶೇಷವಾಗಿ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ 15ಹಳ್ಳಿಗಳಲ್ಲಿಯೂ ಸಮುದಾಯ ಕಾರ್ಯಕ್ರಮಗಳನ್ನು ಜನರು ವಾಸಿಸುವ ಮನೆ ಬಳಿ ತೆರಳಿ ಕಲ್ಪಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.ಇದಕ್ಕೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳ ಸಹಕಾರ ಸಹಕಾರ ದೊರೆಯುತ್ತಿದೆ.ಸಕಾಲದಲ್ಲಿ ಸಾರ್ವಜನಿಕರ ಸಹಕಾರ ದೊರೆತರೇ ನಿಗದಿತ ಅವಧಿಯಲ್ಲಿ

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ : ಮಾಜಿ ಸಚಿವ ಮಂಜು ಸ್ಪಷ್ಟಣೆ

ಇಮೇಜ್
  ಅರಕಲಗೂಡು : ರಾಜ್ಯದಲ್ಲಿ ನಮ್ಮದೆ ಬಿಜೆಪಿ ಸರಕಾರ ಇದೆ.ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತುನೀಡಲಾಗಿದೆ.ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎ.ಮಂಜು ಸ್ಪಷ್ಟಣೆ ನೀಡಿದರು.  ಅರಕಲಗೂಡು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾದ್ಯಮದಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದದು.1999ರಲ್ಲಿ ಬಿಜೆಪಿಯಿಂದ ನಾನು ಶಾಸಕನಾಗಿ ಗೆದ್ದಿದ್ದೇನೆ.ಜಿಲ್ಲೆಯಲ್ಲಿ ಅಂದು ನಾಲ್ಕುಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು.ಆ ಸಂದರ್ಭದಲ್ಲಿ ಮೋದಿ,ಅಮಿತ್ ಶಾ ಇರಲಿಲ್ಲ.ಇಂದು ಅವರೆಲ್ಲರೂ ಇದ್ದಾರೆ.ಇಂತವರ ಸಹಕಾರ ಹಾಗೂ ಕ್ಷೇತ್ರದ ಎಲ್ಲರ ನೆರವಿನೊಂದಿಗೆ ಮುಂದೆ ಬರುವ ಜಿಪಂ ತಾಪಂ ಚುನಾವಣೆ ವೇಳೆ ಕ್ಷೇತ್ರದಲ್ಲಿ ಇದ್ದು ಹೆಚ್ಚು ಮಂದಿ ಗೆಲ್ಲುಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಭರವಸೆಯನ್ನು ಹೊಂದಿದ್ದೇನೆ ಎಂದರು. ನನ್ನ ವಿರೋಧಿಗಳು ನಾನು ಕಾಂಗ್ರೆಸ್ ಪಕ್ಷ ಸೇರುವ ವದಂತ್ತಿಯನ್ನು ಮಾದ್ಯಮಗಳಿಗೆ ಹರಿಬಿಡುತಿದ್ದಾರೆ.ನಾನು ಹೆಚ್ಚು ಕ್ಷೇತ್ರದ ಜನರ ವಿಶ್ವಾಸ ಪಡೆದು ಹಂತ ಹಂತವಾಗಿ ರಾಜಕೀಯವಾಗಿ  ಮೇಲೆ ಬಂದಿದ್ದೇನೆ.ಜಿಲ್ಲೆಯ ರಾಜಕಾರಣದಲ್ಲಿ ಅರಕಲಗೂಡು ಕ್ಷೇತ್ರ ತುಂಬಾ ವಿಭಿನ್ನವಾಗಿದೆ.ಇಲ್ಲಿನ ಮತದಾರರ ನಿರ್ಧಾರವನ್ನು ಯಾರೂ ಕೂಡ ಅರಿಯಲು ಸಾಧ್ಯವಿಲ್ಲ.ಇದನ್ನು ಬಲವಾಗಿ ನಂಬಿರುವ ನನಗೆ ಕ್ಷೇತ್ರದ ಎಲ್ಲಾ ಮತದಾರರು ಮುಂದಿನ ಚುನಾವಣೆಯಲ್ಲಿ ಸಹಕಾರ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡ

"ಅರಣ್ಯ ಇಲಾಖೆ ವಸತಿ ಗೃಹ ಅನಾಥ " ; ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ ನಿರ್ಮಾಣ

ಇಮೇಜ್
 ಅರಕಲಗೂಡು ಪಟ್ಟಣ ಸಮೀಪದ ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ 1.16ಕೋಟಿರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅರಣ್ಯ ಇಲಾಖೆ ನೂತನ ಕಚೇರಿ,ವಸತಿ ಗೃಹಗಳ ಬಳಿ ಅನೈತಿಕ ಚಟುವಟಿಕೆ ನಡೆಯುವ ತಾಣವಾಗಿ ಮಾರ್ಪಟ್ಟಿದೆ. ಕಳೆದ 2019ರ ಜನವರಿ 24ರಂದು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅರಣ್ಯ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು.ಒಂದು ವರ್ಷಗಳ ಅವಧಿಯಲ್ಲಿ ಕೆಲಸ ಮುಗಿಸಿ ತಾಲೂಕು ಮಟ್ಟದ ಅರಣ್ಯ ಇಲಾಖೆ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕು ಎಂದು ತಿಳುವಳಿಕೆ ನೀಡಿದ್ದರು.ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಒಂದೂವರೆ ವರ್ಷ ಕಳೆದಿದ್ದು ಉದ್ಘಾಟನೆಗೊಂಡಿಲ್ಲ. ಸಾಲುಮರದ ತಿಮ್ಮಕ್ಕ ಪಾರ್ಕ್ ಎದುರು ರಾಷ್ಟ್ರೀಯ ಹೆದ್ದಾರಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳ್ಳಲಿದ್ದು, ಮತ್ತೊಷ್ಟು ಅಭಿವೃದ್ಧಿ ಕೆಲಸಗಳನ್ನು ಪಾರ್ಕ್‍ನಲ್ಲಿ ಅಳವಡಿಸಿ ಹೆಚ್ಚುಮಂದಿ ಸಾರ್ವಜನಿಕರು ವೀಕ್ಷಣೆಗೆ ಬರುವಂತೆ ನೋಡಿಕೊಳ್ಳುವ ದೃಷ್ಠಿಯಿಂದ ಅರಣ್ಯ ಇಲಾಖೆ ಕಚೇರಿ,ವಸತಿ ಗೃಹಗಳನ್ನು ಕಟ್ಟಲಾಗಿದೆ. ಕಟ್ಟಡಗಳ ಶಿಥಿಲಾವಸ್ಥೆ : ಲಕ್ಷಾಂತರರೂ ವೆಚ್ಚದಲ್ಲಿ ಒಂದು ಕಚೇರಿ ಕಟ್ಟಡ ಸೇರಿದಂತ್ತೆ ಒಟ್ಟು 7 ವಸತಿ ಗೃಹಗಳನ್ನು ಕಟ್ಟಲಾಗಿದೆ.ವಿದ್ಯುತ್ ಸಂಪರ್ಕ ಹೊರತುಪಡಿಸಿದರೇ ಉಳಿದಂತ್ತೆ ಇತರೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ.ಆದರೆ ನೂತನ ಕಟ್ಟಡಗಳ ಕಾಮಗಾರಿ ಕಳ